ನನ್ನೆದೆಯಲ್ಲಿ ಅಡಗಿರುವ ಸಾವಿರ ನೆನಪುಗಳು,
ನಾ ನಿನ್ನ ಜೊತೆ ಕಳೆದ ಆ ಮಧುರ ಕ್ಷಣಗಳು..!
ಮೊದಲ ಬಾರಿ ನಿನ್ನ ಕಂಡಾಗ ಹುಚೆದ್ದು ಕುಣಿದ ನನ್ನೆದೆ ಬಡಿತಗಳು,
ನಿನ್ನುಚ್ಚು ಪ್ರೀತಿಯಲ್ಲಿ ನನ್ನನ್ನೇ ಮರೆತು ಬರೆದ ಸಾವಿರ ಪತ್ರಗಳು...!
ನನ್ನೆಕಾಂಗಿ ಜೀವನದಲ್ಲಿ ನೀ ಬಂದ ಆ ದಿನಗಳು,
ನಾ ನೀನು ಜೊತೆಗೂಡಿ ಹಂಚಿಕೊಂಡ ಪ್ರೀತಿ ಭಾವನೆಗಳು...!
ಹೇಳು ಪ್ರಿಯೇ ನೀನೇಕೆ ನನ್ನ ಕೈಬಿಟ್ಟೆ.......?
ನನ್ನ ಮನಸ್ಸೆಂಬ ಬರಡು ಭೂಮಿಯಲ್ಲಿ ನೀ ತಂದ ಆ ಮಳೆಯ ಹನಿಗಳು,
ಸತ್ತುಹೋದ ನನ್ನ ಭಾವನೆಗಳಿಗೆ ಸ್ಫೂರ್ತಿ ತುಂಬಿದ ನಿನ್ನ ಜೇನಿನ ಮುತ್ತುಗಳು...!
ನಾನು ನೀನು ಒಂಟಿಯಾಗಿ ಕಳೆದ ಆ ಪ್ರೇಮ ಸಂಜೆಗಳು,
ನಾ ಬೇಸರಗೊಂಡಾಗ ಸಂತೈಸಿದ ನಿನ್ನ ಬೆಚ್ಚನೆಯ ಆಲಿಂಗನಗಳು....!
ಹೇಳು ಪ್ರಿಯೇ ನೀನೇಕೆ ನನ್ನ ಕೈಬಿಟ್ಟೆ.......?
ನಿನ್ನ ಪ್ರೀತಿಗೆ ಮನಸೋತು ನಾ ಕಂಡ ನೂರಾರು ಕನಸುಗಳು,
ಅದನ್ನು ಊಳಿಸಿಕೊಳ್ಳಲು ನಾ ಅನುಭವಿಸಿದ ಸಾವಿರ ಯಾತನೆಗಳು....!
ಕೊನೆಗೂ ನನ್ನ ಸಾವಿರ ಪ್ರಶ್ನೆಗಳಿಗೆ ಉತ್ತರ ಕೊಡದೆ ಮರೆಯಾಗಿಬಿಟ್ಟೆಯ ಪ್ರೀಯೆ....
ಹೇಳು ಪ್ರಿಯೆ ನೀನೇಕೆ ನನ್ನ ಕೈಬಿಟ್ಟೆ....?
Saturday, March 27, 2010
Friday, December 25, 2009
Subscribe to:
Posts (Atom)